ಬೆಂಗಳೂರು,ನ.25: ಥ್ರಿಲ್ಲರ್ ಮಂಜು…ಸ್ಯಾಂಡಲ್ ವುಡ್ ನಲ್ಲಿ ಬಹುಕಾಲದಿಂದಲೂ ಬಹು ಬೇಡಿಕೆ ಹೊಂದಿದ್ದ ಸಾಹಸ ನಿರ್ದೇಶಕರು..ಕನ್ನಡ ಮಾತ್ರವಲ್ಲದೆ ದಕ್ಷಿಣ ಭಾರತದ ಅನೇಕ ಚಿತ್ರರಂಗಗಳಲ್ಲಿ ಸಾಹಸ ನಿರ್ದೇಶನಾಗಿ ಮಾತ್ರವಲ್ಲದೆ ನಿರ್ದೇಶನ, ನಿರ್ಮಾಣದಲ್ಲಿಯೂ ಸೈ ಎನ್ನಿಸಿಕೊಂಡವರು. ಇವರಿಗಿಂದು ‘ವರ್ಚುವಲ್ ಆಫ್ ಯೂನಿವರ್ಸಿಟಿ ಫಾರ್ ಪೀಸ್ ಆಂಡ್ ಎಜುಕೇಷನ್’ ಸಂಸ್ಥೆ ಹಾಗೂ ಯುನೈಟೆಡ್ ನ್ಯಾಷನಲ್ ಆರ್ಗನೈಸೇಷನ್ ಜಂಟಿಯಾಗಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಈ ಮೂಲಕ ಗೌರವ ಡಾಕ್ಟರೇಟ್ ಪಡೆದ ಮೊದಲ ಸಾಹಸ ನಿರ್ದೇಶರೆನ್ನಿಸಿಕೊಂಡಿದ್ದಾರೆ.
ಈ ಸಂಭ್ರಮವನ್ನು ಖುದ್ದು ಸೋಶಿಯಲ್ ಮೀಡಿಯಾದಲ್ಲಿ ಥ್ರಿಲ್ಲರ್ ಮಂಜುರವರು ಹಂಚಿಕೊಂಡಿದ್ದು, ಎಲ್ಲೆಡೆಯಿಂದಲೂ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.