ಭೀಕರ ಸಾಂಕ್ರಾಮಿಕ ಕಾಯಿಲೆ ನೂತನ-ಕೊರೋನವೈರಸ್‌ಗೆ ತತ್ತರಿಸಿ ಜಗತ್ತು ನಡುಗಿದೆ. ಇದೆಲ್ಲದರ ಮಧ್ಯೆ ಜಗತ್ತಿನ ಹಲವೆಡೆಗಳಲ್ಲಿಮ ಕೊರೊನಾ ಸೋಂಕಿತರು ಗುಣವಾಗುತ್ತಿದ್ದಾರೆ. ಆದರೆ ಇದುವರೆಗೂ ಅತೀ ಹೆಚ್ಚು ಜನರು ಸಾವನ್ನಪ್ಪಿರುವುದು ೭೦ ವರ್ಷದ ಮೇಳಿನವರೇ ಹೆಚ್ಚು. ಇದೆಲ್ಲದರ ನಡುವಲ್ಲಿ ಆಶಾದಾಯಕ ಸುದ್ದಿಯೊಂದು ಇಟಲಿಯಿಂದ ಹೊರಬಿದ್ದಿದೆ. ಇಟಲಿಯ ಕರಾವಳಿ ನಗರ ರಿಮಿನಿಯಲ್ಲಿ ೧೦೧ ವರ್ಷದ ವ್ಯಕ್ತಿಯೊಬ್ಬರು ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.
ಈ ಕಾಯಿಲೆಯಿಂದ ಚೇತರಿಸಿಕೊಂಡ ಅತ್ಯಂತ ಹಿರಿಯ ವ್ಯಕ್ತಿ ಅವರಾಗಿದ್ದಾರೆ ಎಂದು ಇಟಲಿಯ ಮಾಧ್ಯಮಗಳು ವರದಿ ಮಾಡಿವೆ. ೧೯೧೯ರಲ್ಲಿ ಜನಿಸಿರುವ ಅವರಲ್ಲಿ ಸೋಂಕು ಪತ್ತೆಯಾದ ಬಳಿಕ ಒಂದು ವಾರದ ಹಿಂದೆ ರಿಮಿನಿಯದ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿತ್ತು. ಅವರು ಚೇತರಿಸಿಕೊಳ್ಳಲು ಆರಂಭಿಸಿದAತೆಯೇ, ಆಸ್ಪತ್ರೆಯ ಎಲ್ಲರೂ ಆ ಬಗ್ಗೆ ಮಾತನಾಡಲು ಆರಂಭಿಸಿದರು ಎಂದು ರಿಮಿನಿ ನಗರದ ಉಪ ಮೇಯರ್ ಗ್ಲೋರಿಯಾ ಲಿಸಿ ಹೇಳಿದ್ದಾರೆ.