ಕೊಪ್ಪಳ: ಕೊಪ್ಪಳ ಬಳಿ ಭೀಕರ ಅಪಘಾತ ಸಂಭವಿಸಿ ಐವರು ಸಾವನ್ನಪ್ಪಿದ್ದಾರೆ. ಸ್ಕಾರ್ಪಿಯೊಗೆ ಬೇರೊಂದು ವಾಹನ ಡಕ್ಕಿಯಾಗಿ ಈ ಅಪಘಾತ ಸಂಭವಿಸಿದೆ.
ಕುಕನೂರು ತಾಲೂಕಿನ ಭಾನಾಪೂರ ಬಳಿ ಶನಿವಾರ ತಡರಾತ್ರಿ ಈ ಅಪಘಾತ ಸಂಭವಿಸಿದ್ದು, ಮೃತರನ್ನು 62 ವರ್ಷದ ದೇವಪ್ಪ ಕೊಪ್ಪದ, 45 ವರ್ಷ ಪ್ರಾಯದ ಗಿರಿಜಮ್ಮ, 35ರ ಹರೆಯದ ಶಾಂತಮ್ಮ, 32 ವರ್ಷದ ಪಾರ್ವತಮ್ಮ, 20 ವರ್ಷದ ಕಸ್ತೂರಮ್ಮ ಎಂದು ಗುರುತಿಸಲಾಗಿದೆ.
ಅಪಘಾತಕ್ಕೊಳಗಾದ ಸ್ಕಾರ್ಪಿಯೋದಲ್ಲಿ ಪ್ರಯಾಣಿಸುತ್ತಿದ್ದ ಇನ್ನೂ ಹಲವರು ಗಾಯಗೊಂಡಿದ್ದು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


















































