ಕೊರೊನಾ ವೈರಸ್ ಎಫೆಕ್ಟ್ ಎಷ್ಟರ ಮಟ್ಟಿಗೆ ವ್ಯಾಪಿಸಿದೆ ಅಂದ್ರೆ .. ದೇವಸ್ಥಾನಕ್ಕೂ ಇದರ ಎಫೆಕ್ಟ್ ಜೋರಾಗಿಯೇ ತಟ್ಟಿದೆ.. ಕರಾವಳಿ ಭಾಗದ ಪ್ರಸಿದ್ಧ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳಕ್ಕೆ ವರ್ಷಪೂರ್ತಿ ಭಕ್ತಸಾಗರ ರಾಜ್ಯ ಮಾತ್ರವಲ್ಲದೆ ಹೊರರಾಜ್ಯದಿಂದಲೂ ಹರಿದು ಬರುತ್ತದೆ. ಆದ್ರೆ ಇದೀಗ ಕೊರೋನಾ ವೈರಸ್ ಹಿನ್ನಲೆ ಭಕ್ತರ ಸಂಖ್ಯೆಯು ಭಾರಿ ಇಳಿಮುಖವಾಗಿದೆ.
ಪರಿಣಾಮ ಸ್ಥಳೀಯ ವ್ಯಾಪಾರಸ್ಥರು , ವ್ಯಾಪಾರವಿಲ್ಲದೆ ಪರದಾಡುತ್ತಿದ್ದು ಕಣ್ಣೀರಿಡುತ್ತಿದ್ದಾರೆ . ಪ್ರತಿಭಾರಿ ಚೆನ್ನಾಗಿ ವ್ಯಾಪರ ನಡೆಸುತ್ತಿದ್ದ ವ್ಯಾಪರಿಗಳು ಕೊರೊನಾ ಎಫೆಕ್ಟ್ ನಂತರ ಸ್ಥಳೀಯ ಪ್ರವಾಸಿಗರು ಕೊಂಚ ಮಟ್ಟಿಗೆ ಈ ಎರಡು ದೇವಸ್ಥಾನಕ್ಕೆ ಬರೋದು ಕಡಿಮೆಯಾದ್ರೆ ; ಇತ್ತ ಅತೀ ಹೆಚ್ಚಾಗಿ ಬರುತ್ತಿದ್ದ ಹೊರಾಜ್ಯ ಹಾಗೂ ವಿದೇಶಿ ಪ್ರವಾಸಿಗರ ಆಗಮನದಲ್ಲಿ ಗಣನೀಯ ಇಳಿಮುಖ ಕಂಡಿದೆ.ಇದರಿಂದ ಬೇಸರಗೊಂಡ ವ್ಯಾಪಾರಸ್ಥರು ಆದಷ್ಟು ಬೇಗ ಕೊರೊನಾ ವೈರಸ್ ನಿಂದ ಮುಕ್ತಿ ಸಿಗಲಿ ಅಂತ ದೇವರ ಮೊರೆಹೋಗಿದ್ದಾರೆ .