ನಮ್ಮ ನಿತ್ಯದ ಆಹಾರ ತಯಾರಿಕೆಯಲ್ಲಿ ಈರುಳ್ಳಿ ಬಳಕೆ ಮಾಡದಿರುವವರು ಬಳಹ ಕಡಿಮೆ ಮಂದಿ..ರುಚಿಯನ್ನು ನೀಡುವ ಉದ್ದೇಶದ ಜೊತೆಗೆ ಆರೋಗ್ಯಕ್ಕೂ ಉತ್ತಮವಾಗಿರುವ ಕಾರಣಕ್ಕೆ ಕಣ್ಣೀರು ತರಿಸಿದರೂ ನೀರುಳ್ಳಿಯನ್ನು ಜನ ನೆಚ್ಚಿಕೊಳ್ತಾರೆ.. ಈರುಳ್ಳಿಯಲ್ಲಿರುವ ಫ್ಲೇವನಾಯ್ಡ್ಸ್ ಇದನ್ನು ಉತ್ತಮ ಪೌಷ್ಟಿಕಾಂಶಗಳ ಮೂಲವಾಗಿದ್ದು, ಕಾರ್ಬ್ಸ್, ಫೈಬರ್, ಶುಗರ್, ಫ್ಯಾಟ್ ಅಂಶಗಳೆಲ್ಲವೂ ಇವೆ….ಹಾಗಾದರೆ ನೀರುಳ್ಳಿಯಲ್ಲಿರುವ ಆರೋಗ್ಯಕರ ಅಂಶಗಳು ಯಾವ್ಯಾವ ಸಮಸ್ಯೆಗಳಿಗೆ ರಾಮ ಬಾಣ ಗೊತ್ತೇ..?
ಈರುಳ್ಳಿಯು ವಿಟಮಿನ್ ಸಿಯ ಉತ್ತಮ ಮೂಲವಾಗಿದೆ. ಆದರೆ, ಈರುಳ್ಳಿಯನ್ನು ಹಸಿಯಾಗಿ ಸೇವಿಸಿದಾಗ ಮಾತ್ರ ಈ ವಿಟಮಿನ್ ಸಿ ಲಾಭ ಸಿಗುತ್ತದೆ. ಇದರಲ್ಲಿರುವ ಫೈಟೋಕೆಮಿಕಲ್ಸ್ ರೋಗ ನಿರೋಧಕ ವ್ಯವಸ್ಥೆಯನ್ನು ಬಲಗೊಳಿಸುತ್ತದೆ. ಹಾಗಾಗಿಯೇ, ಚಳಿಗಾಲದಲ್ಲಿ ಹೆಚ್ಚುವ ಕಾಯಿಲೆಗಳನ್ನು ದೂರವಿಡಲು ಇದು ಸಹಾಯಕ. ನಿಯಮಿತವಾಗಿ ಈರುಳ್ಳಿಯ ಸೇವನೆಯಿಂದ ನಿದ್ರೆಯ ಸಮಸ್ಯೆ ಹಾಗೂ ಹೊಟ್ಟೆಯ ಸಮಸ್ಯೆ ಬಗೆಹರಿಸಿ, ಹಸಿವನ್ನು ಹೆಚ್ಚಿಸುತ್ತದೆ.
ಮೂಗಿನಲ್ಲಿ ರಕ್ತ ಸೋರಿದರೆ ರಕ್ತ ಕಟ್ಟಲು ಈರುಳ್ಳಿಯ ವಾಸನೆ ತೆಗೆದುಕೊಂಡರೆ ಒಳ್ಳೆಯದು. ಈರುಳ್ಳಿ ರಸವನ್ನು ಸ್ವಲ್ಪ ಬಿಸಿ ಮಾಡಿ ಕಿವಿಗೆ ಹಾಕಿದರೆ ಕಿವಿ ಸೋರುವಿಕೆ ಸಮಸ್ಯೆಗೆ ಪರಿಹಾರ ಲಭ್ಯವಾಗುತ್ತದೆ. ಬಾಯಿಯ ಆರೋಗ್ಯಕ್ಕೂ ಇದು ಉಪಕಾರಿ. ಇದರ ಆ್ಯಂಟಿ ಮೈಕ್ರೋಬಿಯಲ್ ಗುಣವು ಹಲ್ಲು ಹುಳ ಹಿಡಿಯುವುದನ್ನು ತಪ್ಪಿಸಿ, ವಸಡಿನ ಸಮಸ್ಯೆಗಳನ್ನು ತಡೆಗಟ್ಟುತ್ತದೆ….
ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು, ಅಸ್ತಮಾ ಇದ್ದವರು ಈರುಳ್ಳಿ ರಸಕ್ಕೆ ಇಂಗು ಹಾಗೂ ಕಲ್ಲುಪ್ಪು ಹಾಕಿ ಸೇವಿಸುವುದು, ಶೀತ ಕೆಮ್ಮಿನಿಂದ ಬಳಲುವವರು ಏನುತುಪ್ಪದೊಂದಿಗೆ ಈರುಳ್ಳಿ ರಸ ಬೆರೆಸಿ ತಿನ್ನಬಹುದು..ಹೀಗೆ ಹೇಳ್ತಾ ಹೋದರೆ ಈರುಳ್ಳಿಯನ್ನು ನಿತ್ಯವೂ ಬಳಕೆ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು ಎಂಬುದು ಸುಳ್ಳಲ್ಲ.