ತುಮಕೂರು: ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಗೃಹ ಸಚಿವ ಆರಗ ಜ್ಞಾನೇಂದ್ರರವರು ಇಂದು, ತುಮಕೂರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಅಧಿಕಾರಿಗಳೂ ಹಾಗೂ ವೈದ್ಯಾಧಿಕಾರಿ ಗಳೊಂದಿಗೆ, ಸಭೆ ನಡೆಸಿದರು. ಸಾರ್ವಜನಿಕರಿಗೆ ಸೇವೆ ಸಲ್ಲಿಸಲು ಇರಬಹುದಾದ ಕುಂದು ಕೊರತೆಗಳ ಬಗ್ಗೆ ಹಾಗೂ ಪರಿಹಾರಗಳ ಬಗ್ಗೆ ಮಾಹಿತಿ ಪಡೆದರು. ಆಸ್ಪತ್ರೆಯಲ್ಲಿ ಸರಕಾರದಿಂದ ದೊರೆಯುವ ಉಚಿತ ಔಷಧಿ ಪೂರೈಕೆ ಬಗ್ಗೆ ವಿಚಾರಿಸಿದ ಸಚಿವರು, ಯಾವುದೇ ಕಾರಣಕ್ಕೂ ಬಡ ಜನತೆ ಔಷದಿಗಾಗಿ ಪರದಾಡುವ ಪರಿಸ್ಥಿತಿ ಬರಬಾರದು ಎಂದು, ಎಚ್ಚರಿಕೆ ನೀಡಿದರು.
ಇತ್ತೀಚೆಗೆ, ಹೆರಿಗೆ ಸಲುವಾಗಿ ಆಸ್ಪತ್ರೆಗೆ ಬಂದು, ಸೇವೆ ಸಿಗದೆ, ಮರಣ ಹೊಂದಿದ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ ಸಚಿವರು, ಇನ್ನು ಮುಂದೆ, ಇಂಥಹ ಅಮಾನವೀಯ ಘಟನೆಗಳು ಮರುಕಳಿಸಬಾರದು, ಎಂದು ತಿಳಿಸಿದರು.
ಹಗಲು ರಾತ್ರಿ ಯೆನ್ನದೆ ಸಮರ್ಪಣ ಮನೋಭಾವನೆ ಯಿಂದ ಸೇವೆ ಸಲ್ಲಿಸುವವರು, ವೈದ್ಯರೂ ಹಾಗೂ ಇತರ ವೈದ್ಯಕೀಯ ಸಿಬ್ಬಂದಿ ಆಸ್ಪತ್ರೆ ಯಲ್ಲಿದ್ದು, ಅದರಿಂದಾಗಿಯೇ, ಆಸ್ಪತ್ರೆ ಬಗ್ಗೆ, ಸಾರ್ವಜನಿಕರೂ, ನಂಬಿಕೆ ಉಳಿಸಿಕೊಂಡು ಬರುತ್ತಿದ್ದಾರೆ, ಎಂದ ಸಚಿವರು, ಯಾವುದೇ ಸಮಸ್ಯೆ ಇದ್ದರೂ ಸರಕಾರ ಪರಿಹಾರ ಒದಗಿಸಲಿದೆ, ಎಂದು ಭರವಸೆ ನೀಡಿದರು.






















































