ಚಂಡೀಗಢ: ಉತ್ತರ ಪ್ರದೇಶದ ಗೊಂಡಾ ಬಳಿ ಪ್ರಯಾಣಿಕರ ರೈಲು ಅವಘಡಕ್ಕೀಡಾಗಿದೆ. ಚಂಡೀಗಢ– ದಿಬ್ರುಗಢ ಎಕ್ಸ್‌ಪ್ರೆಸ್ ಗುರುವಾರ ಹಳಿತಪ್ಪಿದ್ದು, ನಾಲ್ವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಪ್ರಥಮಿಕ ವರದಿಗಳು ತಿಳಿಸಿವೆ.
ಮೋತಿಗಂಜ್– ಜಿಲ್ಹಾಹಿ ರೈಲು ನಿಲ್ದಾಣಗಳ ಈ ರೈಲು ಹಳಿತಪ್ಪಿದ್ದು ಹಲವು ಬೋಗಿಗಗಳಿಗೆ ಉರುಳಿ ಬಿದ್ದಿವೆ. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಧಾವಿಸಿರುವ ಪೊಲೀಸರು ಹಾಗೂ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ಕೈಗೊಂಡರು.
VIDEO | A few bogies of Dibrugarh Express derailed near UP’s Gonda railway station earlier today. Details awaited. pic.twitter.com/SfJTfc01Wp
— Press Trust of India (@PTI_News) July 18, 2024
ನಾಲ್ಕು ಬೋಗಿಗಳು ಹಳಿತಪ್ಪಿದ್ದು, ಈ ಘಟನೆ ಹಿನ್ನೆಲೆಯಲ್ಲಿ ಆ ಮಾರ್ಗದಲ್ಲಿನ ರೈಲು ಸಂಚಾರ ಏರುಪೇರಾಗಿದೆ.