ಮೇಷ:- ವಿಶೇಷ ಶಕ್ತಿಯ ಜನರನ್ನು ಸಂಧಿಸಿ, ಹಲವು ವಿಚಾರವನ್ನು ತಿಳಿದುಕೊಳ್ಳುವ ಮತ್ತು ಬಯಸಿದ ಕೆಲಸವನ್ನು ಸಫಲಗೊಳಿಸುವ ಸಿದ್ದಿ ನಿಮಗೆ ದೊರೆಯುವುದು. ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಸ್ಥಾನಮಾನ ದೊರೆಯುವ ಸಾಧ್ಯತೆ ಇದೆ.
ವೃಷಭ:- ನಿಮ್ಮದೇ ಆದ ವರ್ಚಸ್ಸನ್ನು ಸಂವರ್ಧಿಸಿಕೊಳ್ಳಲು ನೀವು ನಿಮ್ಮ ಸಮಾಧಾನದ ಮಾತಿನ ಶಕ್ತಿಯಿಂದ ಯಶಸ್ವಿ ಆಗುತ್ತೀರಿ. ಮಕ್ಕಳ ಪ್ರಗತಿ ನಿಮಗೆ ಹೆಚ್ಚಿನ ಸಂತೋಷ ಉಂಟುಮಾಡುವುದು. ಭೂಮಿಗೆ ಸಂಬಂಧಪಟ್ಟಂತೆ ಶುಭ ಸಮಾಚಾರ ಕೇಳುವಿರಿ.
ಮಿಥುನ:-ಎಡವಟ್ಟುಗಳೇ ಎದುರಾಗತೊಡಗುತ್ತವೆ. ನಿಮ್ಮ ಮಾತನ್ನು ನಿಮ್ಮ ಕೈ ಕೆಳಗಿನವರು ಪಾಲಿಸುತ್ತಿಲ್ಲಎಂಬ ಕೋಪ ಒಂದು ಕಡೆ ಆದರೆ, ಕೆಲಸದಲ್ಲೂ ಮುಗ್ಗರಿಸುವ ಲಕ್ಷಣಗಳೂ ಕಂಡು ಬರುತ್ತವೆ. ಸ್ವಲ್ಪ ತಾಳ್ಮೆಯಿಂದ ಇರಿ.
ಕಟಕ:– ಹೆಚ್ಚಿನ ಅನುಕೂಲ ಕಂಡು ಬರುವುದು. ನಿಮ್ಮ ವ್ಯಾಪಾರ, ವಹಿವಾಟಿನ ವಿಚಾರಗಳು ನಿಮ್ಮ ಮನಸ್ಸಿನ ಪಕ್ವತೆಯಿಂದಾಗಿ ಸಫಲತೆ ಕಾಣುವುವು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
ಸಿಂಹ:- ಕೆಲವು ಜನರು ನಿಮ್ಮನ್ನು ಅಪಹಾಸ್ಯ ಮಾಡುವ ಸಾಧ್ಯತೆ ಇದೆ. ಅದಕ್ಕಾಗಿ ಹೆದರಬೇಡಿ. ಜನರ ಬೆಂಬಲ ನಿಮಗಿರುವುದು. ಜನರ ಬೆಂಬಲದಿಂದ ಅವರನ್ನು ನಿಗ್ರಹಿಸಬಲ್ಲಿರಿ. ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುವುದು.
ಕನ್ಯಾ:- ಕಲ್ಲಿನಂತೆ ಕುಳಿತು ಗಡಿಯಾರದಂತೆ ಕೆಲಸ ಮಾಡುವ ನಿಮಗೆ ಒಂದು ಸಿದ್ದಿ ಇದೆ. ಆ ಸಿದ್ದಿಯಿಂದ ನೀವು ಎದುರಾಳಿಗಳನ್ನು ನಿಗ್ರಹಿಸಬಲ್ಲಿರಿ. ಅದನ್ನು ಒಳ್ಳೆಯ ವಿಚಾರಗಳಿಗೆ ಬಳಸಿಕೊಂಡಲ್ಲಿಒಳಿತಾಗುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.
ತುಲಾ:- ವಿದೇಶದಿಂದ ಬರುವ ಬಂಧುಗಳು ಅಥವಾ ಕುಟುಂಬವರ್ಗದ ಸದಸ್ಯರು ನಿಮ್ಮ ಸಮಸ್ಯೆಗೆ ಪರಿಹಾರ ಒದಗಿಸಬಲ್ಲರು. ಮಡದಿ, ಮಕ್ಕಳೊಂದಿಗೆ ಸಂತೋಷದಿಂದ ಕಾಲ ಕಳೆಯುವಿರಿ. ನೂತನ ಕಾರ್ಯಭಾರವೊಂದು ನಿಮ್ಮ ಹೆಗಲೇರುವ ಸಾಧ್ಯತೆ ಇದೆ.
ವೃಶ್ಚಿಕ:- ಪ್ರತಿ ಕ್ಷಣದಲ್ಲೂಕಾರ್ಮೋಡಗಳು ಆವರಿಸಿ ಭಯವನ್ನು ಉಂಟುಮಾಡುವವು. ಆದರೂ ಗುರು, ಹಿರಿಯರ ಆಶೀರ್ವಾದದಿಂದ ಆ ಕಾರ್ಮೋಡಗಳು ಕರಗಿ ಮನಸ್ಸಿಗೆ ಸಂತೋಷ ಉಂಟಾಗಲಿದೆ. ಹಣಕಾಸಿನ ಸ್ಥಿತಿ ಸದ್ಯಕ್ಕೆ ಉತ್ತಮಗೊಳ್ಳುವುದಿಲ್ಲ.
ಧನುಸ್ಸು:– ನಿಮ್ಮ ವೈಫಲ್ಯತೆಗೆ ಅನ್ಯರೇ ಹೊಣೆ ಎಂದುಕೊಳ್ಳದೇ ನೀವೇ ಸೂಕ್ತವಾದ ಹೆಜ್ಜೆ ಇರಿಸಿ. ದಾರಿ ಸುಗಮವಾಗುವುದು. ಆಂಜನೇಯ ಸ್ವಾಮಿ ಮಂತ್ರವನ್ನು ಪ್ರತಿನಿತ್ಯ ಪಠಿಸಿ. ಉದರಶೂಲೆಗೆ ಸಂಬಂಧಪಟ್ಟಂತೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ.
ಮಕರ:– ಮಕ್ಕಳ ಬಗೆಗಿನ ವಿಚಾರಗಳು ಸಕಾರಾತ್ಮಕ ಪರಿಣಾಮಗಳಿಂದಾಗಿ ಮನಸ್ಸಿನ ಸಂತೋಷಕ್ಕೆ ಕಾರಣವಾಗಲಿವೆ. ನಿಮ್ಮ ಮನೋಕಾಮನೆಗಳು ಬೇಗನೆ ಈಡೇರುವುವು. ಹಣಕಾಸಿಗೆ ತೊಂದರೆ ಇರುವುದಿಲ್ಲ.
ಕುಂಭ:- ಖರ್ಚಿನ ವಿಚಾರದಲ್ಲಿಒಮ್ಮೆಗೆ ಆಯಿತು ಎಂದು ಒಪ್ಪಿಕೊಳ್ಳಲು ಹೋಗದಿರಿ. ಸರಿಯಾದ ಮಾಹಿತಿ ಪಡೆದು ಹೆಜ್ಜೆ ಇಡುವುದು ಒಳಿತು. ಮಾಡುವ ಕೆಲಸದ ಸ್ಥಳದಲ್ಲಿಎಚ್ಚರಿಕೆಯಿಂದ ಇರಿ. ನಿಮ್ಮ ಮೇಲೆ ಇಲ್ಲಸಲ್ಲದ ಆರೋಪಗಳು ಎದುರಾಗುವ ಸಾಧ್ಯತೆ ಇದೆ.
ಮೀನ:- ಸರ್ವತ್ರ ಅನುಗ್ರಹವನ್ನು ಕರುಣಿಸುವ ಶಿವನು ಕರುಣಾಮಯಿ ಆಗಿರುವುದರಿಂದ ಹಮ್ಮಿಕೊಂಡ ಕೆಲಸ ಕಾರ್ಯಗಳು ಸುಗಮವಾಗಿ ಆಗುವುವು. ಸಮಾಜದಲ್ಲಿಕೀರ್ತಿ ಗೌರವ ಉಂಟಾಗುವುದು. ಸ್ನೇಹಿತರು ಸಕಾಲದಲ್ಲಿನೆರವು ನೀಡುವರು.