ಬೆಂಗಳೂರು,ಸೆ.27: ಅನರ್ಹ ಶಾಸಕರು ರಾಜಕೀಯ ವ್ಯಭಿಚಾರಿಗಳು, ದೇಶದ್ರೋಹಿಗಳು ಎಂಬುದಾಗಿ ನಿನ್ನೆಯಷ್ಟೇ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದರು. ಇದಕ್ಕೆ ಅನರ್ಹ ಶಾಸಕ ಸೋಮಶೇಖರ್ ಪ್ರತಿಕ್ರಿಯೆ ನೀಡಿದ್ದಾರೆ.. ಕೆಪಿಸಿಸಿ ಅಧ್ಯಕ್ಷನನಾಗಿ ನಾಲಿಗೆಯನ್ನು ಬೇಕಾಬಿಟ್ಟಿ ಹರಿಯಬಿಡುವುದು ಸರಿಯಲ್ಲ..ದಿನೇಶ್ ಗುಂಡೂರಾವ್ ಒಬ್ಬ ಅಯೋಗ್ಯ ಎಂಬುದಾಗಿ ಏಕವಚನದಲ್ಲಿ ಸೋಮಶೇಖರ್ ಗುಡುಗಿದ್ದಾರೆ.
ನಮ್ಮ ಅನರ್ಹತೆಯ ಬಗ್ಗೆ ಪದೇ ಪದೇ ಮಾತನಾಡುವುದು ಸರಿಯಲ್ಲ, ಅವರಿಗೆ ಆ ಅಧಿಕಾರವೂ ಇಲ್ಲ ಎಂಬುದಾಗಿ ಮಾಧ್ಯಮಗಳಿಗೆ ಉತ್ತರ ನೀಡಿದ ಅವರು, ದಿನೇಶ್ , ಸಿದ್ದರಾಮಯ್ಯನವರ ಚೇಲ ..ನಾವು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಾದರೂ ಅಲ್ಲಿ ನಡೆಯೋದು ನಾಲ್ಕು ಮಂದಿ ರಾಜಕಾಣೀಗಳ ಕಾಂಗ್ರೆಸ್ ಪಕ್ಷವಷ್ಟೇ…ಚೇಲನಾಗಿರುವವರು ಮಾತ್ರ ಅಲ್ಲಿ ಉಳಿದುಕೊಳ್ಳಬಹುದು..ಆದರೂ ನಾವು ರಾಜೀನಾಮೆ ಕೊಟ್ಟಿರುವುದು ಸಮ್ಮಿಶ್ರ ಸರ್ಕಾರದ ಬಗ್ಗೆ ಅಸಮಾಧಾನಗೊಂಡ ಕಾರಣಕ್ಕೆ..ಕಾಂಗ್ರೆಸ್ ಪಕ್ಷಕ್ಕೆ ಎಂದೂ ನಾವು ರಾಜೀನಾಮೆ ಕೊಟ್ಟಿಲ್ಲ ಎಂಬುದಾಗಿ ಅನರ್ಹ ಶಾಸಕ ಸೋಮಶೇಖರ್ ತಿಳಿಸಿದ್ದಾರೆ.
ದಿನೇಶ್ ಗುಂಡೂರಾವ್ ಯೋಗ್ಯತೆಗೆ ಒಬ್ಬ ಅಡೆಂಡರ್ ಕೂಡಾ ಅವನ ಮಾತು ಕೇಳೋದಿಲ್ಲ.. ಅವನು ಸರಿಯಿಲ್ಲದ್ದಕ್ಕೆ ನಾವು ರಾಜೀನಾಮೆ ಕೊಟ್ಟೆವು ..ಇಂಥವನು ನಮ್ಮ ಅನರ್ಹತೆಯ ಬಗ್ಗೆ ಮಾತನಾಡೋದು ಎಷ್ಟು ಸರಿ..?..ಸಿದ್ದರಾಮಯ್ಯನವರಿಗೆ ನಮ್ಮನ್ನು ಅನರ್ಹಗೊಳಿಸುವುದರಲ್ಲಿ ಖುಷಿ ಇತ್ತು. ಸೋಲುಂಡವರನ್ನೆಲ್ಲಾ ಅನರ್ಹರನ್ನಾಗಿ ಮಾಡುವುದಾದರೆ ಕೆ.ಎಸ್.ಮುನಿಯಪ್ಪನವರನ್ನು, ತುಮಕೂರಿನಲ್ಲಿ ಸೋತ ದೇವೇಗೌಡರನ್ನು, ಮಂಡ್ಯದಲ್ಲಿ ಸೋತ ನಿಖಿಲ್ ಕುಮಾರಸ್ವಾಮಿಯನ್ನು ಯಾಕೆ ಅನರ್ಹರನ್ನಾಗಿಸಿಲ್ಲ..ಎಂಬುದಾಗಿ ಅನರ್ಹ ಶಾಸಕ ಗುಡುಗಿದ್ದಾರೆ..?