ಬೆಂಗಳೂರು: ಅಪ್ಪು ಅಭಿಮಾನಿಗಳಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಸಿಹಿ ಸುದ್ದಿ ನೀಡಿದ್ದಾರೆ. ಗುರುವಾರದವರೆಗೂ ರಿಯಾಯಿತಿ ದರದಲ್ಲಿ ‘ಗಂಧದಗುಡಿ’ ಸಿನಿಮಾ ವೀಕ್ಷಿಸುವ ಅವಕಾಶ ಕಲ್ಪಿಸಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿರುವ ಅವರು, ‘ಗಂಧದಗುಡಿ’ ಅಪ್ಪು ರವರ ಒಂದು ಕನಸು ಕರ್ನಾಟಕದ ವನ್ಯ ಸಂಪತ್ತು ಹಾಗೂ ಪ್ರಕೃತಿ ಸೌಂದರ್ಯವನ್ನು ಕನ್ನಡಿಗರಿಗೆ ಪರಿಚಯಿಸುವ ಅವರ ಹಂಬಲ ಈ ಸಿನಿಮಾ ರೂಪಗೊಳ್ಳಲು ಕಾರಣ, ಅಪ್ಪು ಅವರ ಉದ್ದೇಶ ಈ ಸಿನಿಮಾ ಎಲ್ಲ ಕನ್ನಡಿಗರು ನೋಡಬೇಕೆಂಬುದು ಅದರಲ್ಲೂ ಮಕ್ಕಳು ನೋಡಬೇಕೆಂಬುದು, ಈ ಸಲುವಾಗಿ ನಾನು ಹಾಗೂ ಚಿತ್ರ ತಂಡ ಎಲ್ಲರೊಡನೆ ಚರ್ಚಿಸಿ ವಿತರಕರ ಹಾಗೂ ಪ್ರದರ್ಶಕರ ಸಹಕಾರದೊಂದಿಗೆ ನಮ್ಮ ಚಿತ್ರ ಗಂಧದಗುಡಿಯನ್ನು ನವೆಂಬರ್ 7ರಿಂದ 10ರವರೆಗೂ ಸಿಂಗಲ್ ಸ್ಕ್ರೀನ್ ಥೀಯೇಟರ್ ಗಳಲ್ಲಿ 56 ರೂಪಾಯಿಗಳಿಗೆ ಹಾಗೂ ಮಲ್ಟಿಫ್ಲೆಕ್ಸ್ ಗಳಲ್ಲಿ 112 ರೂಪಾಯಿಗಳಿಗೆ ಕರ್ನಾಟಕ ರಾಜ್ಯಾದ್ಯಂತ ದಿನದ ಎಲ್ಲಾ ಆಟಗಳು ಪ್ರದರ್ಶನ ಮಾಡಬೇಕೆಂದು ನಿರ್ಧಾರ ಮಾಡಿದ್ದೇವೆ. ನಮ್ಮ ಮಕ್ಕಳ ನಾಳೆಗಳಿಗಾಗಿ ಕಾಡನ್ನು ಸಂರಕ್ಷಿಸೋಣ, ಗಂಧದಗುಡಿ ಯನ್ನು ತೋರಿಸೋಣ ಎಂದಿದ್ದಾರೆ.
ನಾಡಿನ ಜನತೆಯಲ್ಲಿ ನನ್ನ ಒಂದು ಮನವಿ…
An appeal to all the people of the state.#GGKids #GGMovie #GandhadaGudi #DrPuneethRajkumar pic.twitter.com/tf01Kt2Alu
— Ashwini Puneeth Rajkumar (@Ashwini_PRK) November 6, 2022






















































